Thursday, October 6, 2011

BAALYA

ತಿರುಗಿ ನೋಡ ಬಯಸಿದೆ ಮನಸು,
ನಾ ಬಂದ ದಾರಿಯ-ನನಗರಿಯದಂತೆ,
ತಿರುಗಿ ನೋಡ ಬಯಸಿದೆ ಮನಸ್ಸು..

ಅಂಗಳದ ರಂಗವಲ್ಲಿ, ಹಾರುತಿಹ ಗಾಳಿಪಟ,
ಪುಟ್ಟದಾದ ಲಂಗ ಕುಪ್ಪಸ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ತುತ್ತಿಡುವ ಅಮ್ಮ, ಆಡಿಸುವ ಅಪ್ಪ, 
ಬೆತ್ತ ಹಿಡಿದ ಮೇಸ್ಟ್ರ, ಕಥೆ ಹೇಳುವ ಅಜ್ಜಿ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ಬರಿಯ ಹೋರಾಟದ ಬದುಕು - ಸಾಕೆನಿಸಿ
ಬಯಸಿದೆ ಮನವು ನೆಮ್ಮದಿಯ,
ಮಲಿನವಾದ ಜೀವನವು- ಸಾಕೆನಿಸಿ
ಹುಡುಕ ಹೊರಟಿದೆ ಮನವು- ಹೊಸತನವ..

1 comment:

  1. Nimma manasina bhavane Tumba chennagi moodi bandide. Nanagu Kooda ballya bekenista ide :)

    ReplyDelete