Thursday, August 4, 2022

ಕಾಡ್ಗಿಚ್ಚು

ಮಕ್ಕಲ್ಲಿದ್ದರವ್ವ ಮನೆ ತುಂಬಾ , 

ಎಲ್ಲಿ ಹುಡುಕಲಿ ?? 

ಹಸಿದ ಹೊಟ್ಟೆ .. ನೀರಿನ ದಾಹ ,

ಯಾರ ಕೇಳಲಿ?? 


ಕಾಲಿಟ್ಟಲೆಲ್ಲ ಬೆಂಕಿ , 

ಎಲ್ಲಿ ಓಡುವುದು... 

ದಾಹ ,ಕೂಗು,ಸಂಕಟ, ಹಸಿವು .. 

ಯಾರ ಮೊರೆ ಹೋಗುವುದು?? 

 

ಸುಟ್ಟು ಕರಕಲಾಯಿತು ನಮ್ಮ ಮನೆ ...

ಸ್ಮಶಾನವಾಯಿತು ಭಸ್ಮವಾಯಿತು ನಮ್ಮ ಮನೆ ... 


ಉರಿಯದಿರು ಬೆಂಕಿಯೇ ,

ಬಿಸದಿರು ಗಾಳಿಯೇ ..

ಬಾರೂ ಒಮ್ಮೆ ಮಳೆರಾಯ

ತಣಿಸೋಮ್ಮೆ ಇಳೆಯ .. 

-vidu 

ಇದೆ ಅಲ್ಲವೇ ಪ್ರಾಣಿಗಳ ಆರ್ತನಾದ.. 

ವನ್ಯ, ಪ್ರಾಣಿ ಪಕ್ಷಿಗಳಿಂದ ಶ್ರೀಮಂತ ವಾಗಿದ್ದ ನಮ್ಮ

ಬಂಡೀಪುರ ಅಭಯಾರಣ್ಯದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ 5 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ.. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆಯ ಬರೆಕಟ್ಟೆ ಹಾಗೂ ಗುಡ್ಡಕೆರೆ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬೆಂಕಿ ಹಿಮವದ್ ಗೋಪಾಲ ಸ್ವಾಮಿ ವಲಯದವರೆಗೂ ಹರಡಿದೆ. ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿ ಹಬ್ಬಿದೆ. ಬೆಂಕಿಯ ಈ  ರುದ್ರನರ್ತನಕ್ಕೆ ಅಪಾರ ವನ್ಯಸಂಪತ್ತು ಸುಟ್ಟು ಭಸ್ಮವಾಗಿದೆ.. ಸೂರಿಲ್ಲದ ಪ್ರ್ರಾಣಿಗಳು, ನೀರು , ಅಹಾರವಿಲ್ಲದೆ ಎಲ್ಲಿ ಪರಿತಪಿಸುವುದೋ.. ಬೆಂಕಿಯ ಈ ಅನಾಹುತ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತದೆ .. ಮಳೆರಾಯ ಬಂದ್ದೋಮ್ಮೆ ಇಳೆಯ ತಣಿಸಯ್ಯ.. 

Tuesday, April 21, 2020

ಮನಸುಗಳ ಮಿಲನ ಒಂದು ಕಡೆ , 
ಮುರಿದಾವು ಹಲವೆಡೆ , 
ಕೂಡಿ ಬಾಳುವ ಸಡಗರ ಎಲ್ಲರದು ...
ಸಂಸಾರವೇ ಇಲ್ಲದ ನೋವು ಹಲವರದು ...


ಹಸಿದ ಕಂಗಳು ಒಂದೆಡೆ , 
ದಿಕ್ಕು ತೋಚದೆ ಓಡುತಿರುವ ಕಾಲುಗಳು ಮತ್ತೊಂದೆಡೆ , 
ನಾಳೆಯ ಚಿಂತೆ ಕೆಲವರದು ...
ನಾಳೆಯನ್ನೇ ಕಾಣದ ಜೀವ ಹಲವರದು ...

ಮಾಲಿನವಿಲ್ಲದೆ ಹರಿಯುತಿಹುದು ನದಿಗಳು, 
ಗಗನದಲ್ಲಿ ರೆಕ್ಕೆ ಬಿಚ್ಚಿ ಉತ್ಸಾಹದಿಂದ 
ಹಾರಡುತ್ತಿರುವ ಹಕ್ಕಿಗಳು, 
ನಲಿಯುತಿಹುದು ಕಾನನ , 
ಉಸಿರಾಡುತಿಹಳು ಧರೆ ... 

ಸ್ತಬ್ಧ ಎಲ್ಲಾ ಸ್ತಬ್ಧ..
ಕರೊನಾದ ಕಾರ್ಮೋಡ ಕರಗುವ ತನಕ ಎಲ್ಲಾ ನಿಶಬ್ಧ 

ನಮಿಸೋಣ ದೇವರಿಗೆ 
ದೇವರಂತಿರುವವರಿಗೆ 🙏🙏🙏
ಹಿಡಿಯೋಣ ಬೀಳುತಿರುವ ಕೈಗಳನು ... 
ಹೆಗಲು ಕೊಡೋಣ ಕಂಬನಿಯ ಕಂಗಳಿಗೆ ..
ಹಂಚೋಣ ಪ್ರೀತಿ , ಪರಿತಪಿಸುತಿರುವ ಹೃದಯಗಳಿಗೆ.. 

ವಿದು ❤️

Saturday, January 11, 2020



ನನ್ನ ಕಂಗಳು ... 


ರಾತ್ರಿಯೆಲ್ಲ ನಿನ್ನ ಕನಸನ್ನು ಹೊತ್ತು , 
ನಿದ್ದೆ ಮಾಡದೆ ನಿನಗಾಗಿ ಕಾದು ಕುಳಿತು,
ದಿನವಿಡಿ ನಿನ್ನ ಹುಡುಕಾಡಿ , 
ಸೋತಿಹುದು ನನ್ನ ಕಂಗಳು ನಿನ್ನನ್ನೇ ನೆನೆದು❣️


                                ಗೆಜ್ಜೆಗಳು

ಹುಚ್ಚೆದ್ದು ಕುಣಿಯುತಿತ್ತು ನನ್ನ ಕಾಲಿನ ಗೆಜ್ಜೆಗಳು.
ಹೊಳೆಯುತ್ತಿದೆ ನಕ್ಷತ್ರದಂತೆ ನನ್ನ ಕಾಲ್ನಡಿಗೆಯಲ್ಲಿ,
ಅಮ್ಮನ ಪ್ರೀತಿಯ ನೆನಪಿನ ಕಾಣಿಕೆ, 
ಅವಳ ಪ್ರೀತೀಯ ಉಡಿಗೆ... 
ಗೆಜ್ಜೆ ಕಾಲುಂಗುರವಲ್ಲವೇ ಹೆಣ್ಣಿನ ನೆಚ್ಚಿನ ಆಭರಣ 
ಅದರ ಘಲ್ಲು ನಾದವಲ್ಲವೇ ಇನಿಯನಿಗೆ ಮಧುರ ಗಾನ.. ❤️

Flaunting my new Anklets #anklets  #jewellery #feetography #feetselfie 


ಒಲವಿನ ಗೆಳೆಯನೇ ನಿನಗೆ ಕೈ ಮುಗಿವೆ .


ನಿಮ್ಮ ಪ್ರೇಮವೋ , ಅತಿಯಾದ ಒಲವೋ ,
ನಿಮ್ಮ ಸವಿಮತೋ,ನಿಮ್ಮ ಮಗುವಿನಂತ ಮನಸೋ?? 
ಸೆರೆಯಾಗಿ ಹೋದೆ ನಿಮ್ಮ ತೋಳ ತೆಕ್ಕೆಯಲಿ 
ಮರೆಯಾಗಿದೆ ಜಗವೆಲ್ಲ ನಿಮಾದೊಂದೇ ಧ್ಯಾನದಲಿ...

                                 ಇರುಳೆಲ್ಲ ಕಾಡುವ ಕನಸು ,
                                 ನಿಮ್ಮನ್ನಗಲಿ ಬಾರದ ನನ್ನ ಮನಸು ...
                                 ಹೃದಯದಲ್ಲೇ ಉಳಿಯುವ ಮಾತುಗಳು 
                                 ಒಂದೆರಡು ನಿಮಿಷವಾದರೂ ನಿನ್ನ ನೋಡ ಬಯಸುವ ನನ್ನ ಕಣ್ಣುಗಳು..


ಇನಿಯ ... ನನ್ನ ಜೇವದ ಗೆಳೆಯ 
ನೀನೆ ನನ್ನ ಬಾಳ ಬಂಗಾರ 
ನಿನ್ನ ನೆನೆಪೇ ನನಗಾಧಾರ...

Wednesday, January 6, 2016


ದೇಶ  ನಮ್ಮ ತಾಯಿ ಎಂದು
ಹೊರಡುವ ಯೋಧರೇ ..
ದೇಶಕಾಗಿ ಪ್ರಾಣ ತೆತ್ತು
ನಮ್ಮ ಕಾಯುವ ವೀರರೇ... ನಿಮಗಿದೋ ನಮ್ಮ ನಮನ..

ಕರುಳ ಕೊರೆವ  ಚಳಿಯಲಿ, ಮೈಯ ಸುಡುವ ಬಿಸಿಲಲಿ
ವೈರಿಗಳ ನಾಶವೇ ಗುರಿಯೆಂಬ ಛಲದಲಿ
ಪ್ರಾಣವನ್ನು ಮೀಸಲಿಟ್ಟು ತಾಯ್ನಾಡ ಮಡಿಲಲಿ
ನೊಂದು ಬೆಂದು ಕಾಯುವ
ವೀರ ಯೋಧರೇ...  ನಿಮಗಿದೋ ನಮ್ಮ ನಮನ...

ತಾಯಿ, ಮನೆ, ಮಡದಿ, ಮಕ್ಕಳನ್ನು ತೊರೆದು,
ದೇಶವೇ ಪ್ರಾಣವೆಂದು ಹಗಲು ಇರುಳು ದುಡಿದು..
ಶರ್ತೃಗಳ ಅಟ್ಟಹಾಸವನ್ನು ಮೆಟ್ಟಿ  ಮೆರಿದು..
ಕೆಚ್ಚದೆಯಲಿ ನಮ್ಮ ಕಾಯುವ
ವೀರ ಯೋಧರೇ... ನಿಮಗಿದೋ ನಮ್ಮ ನಮನ.

Wednesday, October 21, 2015

ಬೆಳೆ  ಇಲ್ಲ  -ರೈತರಿಗೆ  
ಬದುಕಲು  ನೆಲೆ  ಇಲ್ಲ  
ಹಗಲೆಲ್ಲ  ಇರುಳೆಲ್ಲ  ದುಡಿದರು  
ಅವರಿಗೇ ಕೂಳಿಲ್ಲ... 
ದಿನವೆಲ್ಲ ಬೆವರು  ಸುರಿದರು 
ಮುಖದಲ್ಲಿ  ಜೀವದ  ಕಳೆ ಇಲ್ಲ,
ಸಾಲದ  ಶೂಲವು  ಕೊರಳಿಗೆ  ಬಿದ್ದರು  
ಮೃತ್ಯು  ದೇವತೆಗೆ  ಕರುಣೆ ಇಲ್ಲ. 
ಹೊರಳುತ್ತ, ನರಳುತ್ತ, ತಳಮಳಿಸುತ್ತ  
ಜೀವವು ಬೆಂದರು,
ಮರಣದ  ಬೆಳಕು ಕಾಣಲಿಲ್ಲ, 
ಬದುಕಲು ಆಸೆಯಿಲ್ಲ -- ವಿಧು 

ಅನ್ನದಾತರು  ಸಾಯುತಿದ್ದರೆ .. ಮoದೋoಮ್ಮೆ  ಕುಡಿಯುವ  ನೀರು  ಕಲುಷಿತ , ಉಸಿರಾಡುವ  ಗಾಳಿ  ಕಲುಷಿತ,ದುಡಿಯಲು  ರೈತನಿರುವುದಿಲ್ಲ  ಆಗ ಕೂತು ನಮ್ಮ  ಬೆಳ್ಳಿ -ಬಂಗಾರ , ದುಡನ್ನು ತಿನ್ನಲಾದಿತೆ? ಏಚೆತ್ತುಕೊಳ್ಳಿ . 
ತoಪದವೋ ಎಲ್ಲಾ ತoಪದವೋ.... 
ಧಗೆಯಿಂದ ಸುಡುತ್ತಿದ  ಧರೆಯೆಲ್ಲ , 
ಒಣಗಿದ್ದ  ಗಿಡ ಮರ, ಹೋಬಳ್ಲಿಗಳೆಲ್ಲ .... ಹಸಿರದವೋ ! 
ಹಸಿರ  ಹಾಸಿಗೆಯಂತೆ  ಭುವಿಯೆಲ್ಲ  ನಗುತವೆ , 
ನದಿಗಳು ಝುರಿಗಳು ಕುಣಿಯುತ್ತ  ಹರಿದಾವೆ..
ಮಳೆರಾಯ ನೀ ಬಂದು ಇಳೆಯೆಲ್ಲ ಮುದ್ದಿಸಿ ಲಾಲಿಸಿ ಹೋದಾಗ ,
ಹಸಿರದವೋ  ಎಲ್ಲಾ ಹಸಿರದವೋ.... 
ತoಪದವೋ ಎಲ್ಲಾ ತoಪದವೋ... 

ಸಾವಿರಾರು ಜನರು ಸದಾ ಸುತ್ತ ಸುತ್ತುವರಿದಿದ್ದರು,
ನಿನ್ನ ನೆನಪಾಗುತಿದ್ದೆ.. ಮತ್ತೆ ಮತ್ತೆ ನನ್ನ ಕಾಡುತಿದೆ..
ನಾವು ಅಲೆದಾಡಿದ ದಾರಿಗಳೆಷ್ಟೋ, ಮಾತನಾಡಿದ ಮಾತುಗಳೆಷ್ಟೋ...
ತಿರುಗಾಡಿದ ತಿರುವುಗಳೆಷ್ಟೋ, ಪ್ರೀತಿಸಿದ ಗಳಿಗೆಗಳೆಷ್ಟೋ..

ಹೋದ ಕಡೆಯಲೆಲ್ಲಾ ನಿನ್ನ ನೆನಪಾಗುತ್ತಿದೆ.
ಮಾತಿಲ್ಲದೆ ದನಿ ಕುಗ್ಗಿದೆ, ಪದಗಳು ಸತಿದ್ದೆ, ಮನ ಸೋತಿದೆ..
ಮತ್ತೆ ಮತ್ತೆ ನಿನ್ನ ನೆನಪಾಗುತ್ತಿದೆ..ನನ್ನ ಕಾಡುತಿದೆ..

ಮಧುರ ಎಂದು ಮುಗುಳ್ನನಗಲೇ??
ಕಣ್ಣಿನಿಂದ ಬೀಳುವ ಕಂಬನಿಯಣೆನಿಸಲೆ??
ಮನಸಿನಲ್ಲಾದ ಗಾಯ ಮೊದಲು..
ಅದರ ಮೇಲೆ ನಿನ್ನ ನೆನಪಿನ ನೋವಿನ ಬರೆಗಳು.
ರಾತ್ರಿಯ ನಿದ್ದೆಯಲಿ ಬಂದು ಬಡಿದೆಬ್ಬಿಸಿ ಹೋಗದಿರು...
ಮನದ ಮನೆಯನು ರಾಢಿ ಮಾಡದಿರು..
ಮತ್ತೆ ಬಾರದಿರು.. ಎಂದೂ ನೆನಪಗದಿರು..

Thursday, October 15, 2015

ನನ್ನದೆಲ್ಲವ ನಿನಗೆ ಕೊಟ್ಟು
ಇದ್ದರೂ ಇರದಂತೆ
ಇದ್ದು ಬಿಡುವ ಆಸೆ...
ನಿನ್ನಲೇ ಮುಳುಗಿ ಬಿಡುವ ಆಸೆ...

Monday, August 11, 2014

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ....
ಹರದೆ ಏಕೆ ನೀನೆ ಅದನು ಏನೋ ಒಂದು ನೆಪದಲಿ...
ನನ್ನ ಬಾಳ ಚಿಗುರೆಲೆಗಳಲ್ಲಿ ಹಸಿರಿಲ್ಲ ಗೆಳೆಯ.. 
ಕೆ0ದಾವರೆಯಲ್ಲಿ  ಕೆ0ಪಿಲ್ಲ ... 
ನೀನಿಲ್ಲದೆ ಇನಿಯ ನನ್ನ ಬಾಳ  ಕಾಮನಬಿಲ್ಲಲಿ ರ0ಗಿಲ್ಲ ...

Monday, December 2, 2013

ನನ್ನ ಕವನ 

ಚಂಪೂ ಕಾವ್ಯ ವಲ್ಲ ... ಅಲಂಕಾರಗಳಿಲ್ಲ ..
ಭಾಮಿನಿ ವಾರ್ಧಕ ಷಟ್ಪದಿಗಳಿಲ್ಲ...
ಸರಳ ಭಾವಗಳ ಬರೆತಾ - ನನ್ನ ಕವನ 

ಹೃದಯದಾಳದ ಮಿಡಿತ, ಪದಗಳ ಕೊರೆತ, 
ಅಂತರಂಗದ ಮಾತು..
ಎದೆಯಾಳದ ತುಣುಕು- ನನ್ನ ಕವನ

ಕೋಗಿಲೆಯ ಕಂಟದಲಿ.. ಪುಟ್ಟ ಕಂದನ ಕೇಕೇಯಲಿ
ಅಮ್ಮನ ಅಕ್ಕರೆಯ ಮಾತಲ್ಲಿ,
ನಲಿದಾಡಲಿ - ನನ್ನ ಕವನ.

ಕಾಮನ ಬಿಲ್ಲಾಗಿ.. ಹಕ್ಕಿಯ ಹಾಡಾಗಿ..
ಗೆಜ್ಜೆಯ ದನಿಯಾಗಿ ,
ಹೂವಿನ ನಗುವಾಗಲಿ- ನನ್ನ ಕವನ 
ನಮ್ಮವರು

ಬೀದಿ ಬೀದಿ ತಿರುಗುವ ತಿರುಕ
ಮೊಂಡ ಕೈ ತೆತ್ತ ಭಿಕ್ಷುಕ
ಅಪ್ಪ ಅಮ್ಮನ ಕಾಣದ ಕಂದಮ್ಮಗಳು
ಇವರೆಲ್ಲರೂ ನಮ್ಮವರೇ ..
ನಮ್ಮೊಂದಿಗಿರುವವರೇ..

ಬಟ್ಟೆಯ ಕಾಣದ ಅರೆಬೆತ್ತಲೆ ಮೈಗಳು
ಹೊಟ್ಟೆಗಾಗಿ ಆಯುವ ಅಲೆಯುವ ಮಕ್ಕಳು
ನಾಳೆಯ ಕಾಣದವರೂ
ಇಂದಿನ ಬಾಳ್ವೆಗೆ ಹೊರಡುವವರು
ಇವರೂ ನಮ್ಮವರೇ.. ನಮ್ಮೊಂದಿಗಿರುವವರೇ..
ನಮ್ಮ ಪುಣ್ಯ ಭೂಮಿ ಭಾರತದವರೇ.. 

Friday, November 22, 2013

ನಿಸರ್ಗ  


ಮನುಜನಿಗಿದು ನೀ ಕೊಟ್ಟ ವರ
ಭೂಮಿಗೊಲಿದ ಮಧುರ ಸ್ವರ 
ನಮಗಿರೊವುದೊಂದೇ ಕಣಜ 
ಅದನಾರಿಯಬೇಕು ನೀ ಮನುಜ. 

ಕೊನೆಗಾಣಿಸಿ ಅವನು ವನ ಐಸಿರಿ
ಕಟ್ಟಿಕೊಂಡಿಹನು ತನೆಗೆ ತಾನೇ ಗೋರಿ
ಮಾಡಿ ಜೀವ ಜಂತು ಗಳ ಕೊಲೆ
ತಿಳಿದವಗೆ ಇದರ ಬೆಲೆ.

ಅಳಿಸದಿರು ನಿಸರ್ಗದ ಮಂದಹಾಸ
ತೋರದಿರು ಅದರ ಮೇಲೆ ನಿನ್ನ ಅಟ್ಟಹಾಸ
ಕೊನೆಗಾಣಿಸದಿರು ಅವಳ ಸುಂದರ ಛಾಯೆ 
ತೊಲಗಿಸು ತಾಯೆ ಅವನಿಂದ ಈ ಮಾಯೆ.

ಬೆಳೆಸೋಣ ಬನ್ನಿ ನಾವೆಲ್ಲರೂ ಸೀರಿ
ವನವೇ ಸಂಪ್ತಾತು ಆದ ನೀ ಆರಿ
ಸುತ್ತಲೂ ಆವರಿಸಿದರೆ ನಿಸರ್ಗ
ನೀ ಕಂಡು ಸವಿದರೆ ಅದೇ ಸ್ವರ್ಗ..

ಮರಗಳ ಬೆಳೆಸಿ .. ನಮ್ಮ ಪೀಳೀಗೇಯ ಉಳಿಸಿ...

Monday, November 18, 2013

ಬಾಯಾರೇಕೆ ನೀಗುವ ಮುನ್ನವೇ ಮಳೆ ನಿಂತು ಹೂಗಿತ್ಹು...
ನಿನ್ನ ನೆನಪನ್ನು ಮೆಲುಕು ಹಾಕುತಿದ್ದೆ....
ನಿದ್ದೆ ಬರುವ ಮುನ್ನವೇ ರಾತ್ರಿ ಕಳೆದು ಹೋಗಿತು..
ಸಂಜೆಯ ತಂಗಾಳಿ, ತೇಲಿ ಬಂದ ಪರಿಮಳ, 
ಮುಂಗುರುಳ ನರ್ತನ, ಕೈ ಹಿಡಿದು ನೆಡೆಸುವಂತೆ...., 
ಇನಿಯಾನೊಬ್ಬನಿದ್ದಾನೆ!!

ಒಬ್ಬಳೇ ಕೂತಾಗ ಮನ ಸೋತಾಗ, 
ನೊಂದು ಕಂಬನಿ ಹರಿಸಿದಾಗ, ಬಂದು ಕಣ್ಣೊರಸಿ ನಗಿಸುವಂತೆ..,
ಗೆಳೆಯನೊಬ್ಬನಿದ್ದಾನೆ!!

ನನ್ನ ನಿದ್ದೆಯಲಿ ಬಣ್ಣ ಬಣ್ಣದ ಕನಸು ಚೆಲ್ಲಿ,
ಅವನ ತೋಳ ಚಾಚಿ, ಲಾಲಿ ಹಾಡಿ, ಮಲಗಿಸುವಂತೆ..,
ನಲ್ಲನೊಬ್ಬನಿದ್ದಾನೆ!!

ಸುಮ್ಮನೆ ಕೂತಾಗ ಮಾತನಾಡಿಸಿ, ಹೋದಲೆಲ್ಲಾ ಹಿಂಬಾಲಿಸುತ್ತಾ.
ಕೋಪ ಬಂದಾಗ ಸಂತ್ವನಿಸುತ್ತಾ, ಗೆಳೆಯನೊಬ್ಬನಿದ್ದಾನೆ,
ನನ್ನೋಡನೆಯೆ...ನನ್ನೊಳಗೆಯೇ ಅವಿತ ಒಡೆಯನೊಬ್ಬನಿದ್ದಾನೆ!!!

Thursday, August 23, 2012

maLe

ಹಸಿರ ತುಂಬಿಸಿ ಮರವೆಲ್ಲ,
ಹೂಗಳ ನಗಿಸಿ ಗಿಡದಲ್ಲೆಲ್ಲ,
ಮಣಿನ ಕಂಪು ಊರೆಲ್ಲ, 
ಸೊಗಸಿದು ಹಳ್ಳಿಯ ಮಳೆ... 

ರೊಚ್ಚೆಯ ಮೆತ್ತಿಸಿ ಕಾಲೆಲ್ಲಾ,
ಚರಂಡಿಯ ನೀರು ಹೊರಗೆಲ್ಲ,
ಕೊಚ್ಚೆಯೇ ತುಂಬಿದೆ ಊರೆಲ್ಲ,  
ಯಾತನೆ ಇದು ಪೇಟೆಯ ಮಳೆ..


Thursday, October 6, 2011

BAALYA

ತಿರುಗಿ ನೋಡ ಬಯಸಿದೆ ಮನಸು,
ನಾ ಬಂದ ದಾರಿಯ-ನನಗರಿಯದಂತೆ,
ತಿರುಗಿ ನೋಡ ಬಯಸಿದೆ ಮನಸ್ಸು..

ಅಂಗಳದ ರಂಗವಲ್ಲಿ, ಹಾರುತಿಹ ಗಾಳಿಪಟ,
ಪುಟ್ಟದಾದ ಲಂಗ ಕುಪ್ಪಸ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ತುತ್ತಿಡುವ ಅಮ್ಮ, ಆಡಿಸುವ ಅಪ್ಪ, 
ಬೆತ್ತ ಹಿಡಿದ ಮೇಸ್ಟ್ರ, ಕಥೆ ಹೇಳುವ ಅಜ್ಜಿ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ಬರಿಯ ಹೋರಾಟದ ಬದುಕು - ಸಾಕೆನಿಸಿ
ಬಯಸಿದೆ ಮನವು ನೆಮ್ಮದಿಯ,
ಮಲಿನವಾದ ಜೀವನವು- ಸಾಕೆನಿಸಿ
ಹುಡುಕ ಹೊರಟಿದೆ ಮನವು- ಹೊಸತನವ..

ARPANAE: NANNA KANNADA NADIGE

ಜಯ ಜಯ ಈ ನಾಡಿಗೆ
ಕರುನಾಡ ತಾಯಿ ಭುವನೇಶ್ವರಿಗೆ..


ಕನ್ನಡ ನಾಡಿದು ಧಾನ್ಯದ ನೆಲ,
ಇಲ್ಲಿ ಜನಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ,
ಕನ್ನಡಾಂಬೆಯ ಮಾಡಿಲ್ಲಲ್ಲಿರುವ ಈ ಬಾಲ,
ಸಿಗಲಾರದು ಬೇರೆಲ್ಲೂ ಈ ಛಲ..


ಸತ್ಯ ಅಹಿಂಸದಿಂದ ಮೆರೆದ ನಾಡಿದು,
ಸಂಯಮ ಶೀಲರ ಪುಣ್ಯದ ಬೀಡಿದು.
ಗಂಧದ ಗುಡಿದು, ನಮ್ಮ ತವರೂರಿದು,
ಹಾಲ್ಜ್ಜೆನು ಹರಿಯುವ ನಾಡಿದು ನಮ್ಮದು..


ಕನ್ನಡದ ಕೀರ್ತಿಯನ್ನು ಎಲ್ಲೆಡೆಗೆ ಸಾರಿರಿ..
ಕನ್ನಡದ ಕಂಪನ್ನು ಎಲ್ಲೆಡೆಗೆ ಬೀರೀರಿ,
ನಮ್ಮ ತಾಯ್ನಾಡಿಗೆ ಶುಭ ಗೀತೆಯ ಹಾಡಿರಿ..
ಕನ್ನಡಾಂಬೆಗೆ ಐಕ್ಯ-ದಾರತಿಯ ಬೆಳಗಿರಿ..


ಈ ನಾಡ ಮಣ್ಣಲ್ಲಿ ಬೆಳೆದ ವೀರ ಮಕ್ಕಳೇ ಎಳೀರೀ
ನಮ್ಮ ತಾಯ ಸೇವೆಯ ಗೈಯುವ ಬನ್ನಿರಿ..
ಕನ್ನಡವ ಉಳಿಸಿರಿ, ಕನ್ನಡವ ಬೆಳೆಸಿರಿ, ಕನ್ನಡಾಂಬೆಯ ಗೆಲಿಸಿರಿ...