ಕನಸುಗಳು...ಮನದ ಮಿಡಿತಗಳು..ಸ್ವಪ್ನಲೋಕದ ಸೌದಾ..ಇವುಗಳನ್ನು ವರ್ಣಿಸಲು ಹೊರಟರೆ ಅವು ಬರಿಯ ಪದಗಳಾಗಿಯೇ ಉಳಿದು ಬಿಡುತವೆ.. ಇಲ್ಲಿ ನನ್ನ ಕೆಲವು ಕನಸುಗಳನ್ನು,ಕಲ್ಪನೆಗಳನ್ನು ಒಟ್ಟುಗೂಡಿಸಿ ಹೇಳಲು ಪ್ರಯತ್ನಿಸಿದ್ದೇನೆ..
Saturday, January 11, 2020
ಗೆಜ್ಜೆಗಳು
ಹುಚ್ಚೆದ್ದು ಕುಣಿಯುತಿತ್ತು ನನ್ನ ಕಾಲಿನ ಗೆಜ್ಜೆಗಳು.
ಹೊಳೆಯುತ್ತಿದೆ ನಕ್ಷತ್ರದಂತೆ ನನ್ನ ಕಾಲ್ನಡಿಗೆಯಲ್ಲಿ,ಅಮ್ಮನ ಪ್ರೀತಿಯ ನೆನಪಿನ ಕಾಣಿಕೆ,
ಅವಳ ಪ್ರೀತೀಯ ಉಡಿಗೆ...
ಗೆಜ್ಜೆ ಕಾಲುಂಗುರವಲ್ಲವೇ ಹೆಣ್ಣಿನ ನೆಚ್ಚಿನ ಆಭರಣ
ಅದರ ಘಲ್ಲು ನಾದವಲ್ಲವೇ ಇನಿಯನಿಗೆ ಮಧುರ ಗಾನ.. ❤️
Flaunting my new Anklets #anklets #jewellery #feetography #feetselfie
ಒಲವಿನ ಗೆಳೆಯನೇ ನಿನಗೆ ಕೈ ಮುಗಿವೆ .
ನಿಮ್ಮ ಪ್ರೇಮವೋ , ಅತಿಯಾದ ಒಲವೋ ,
ನಿಮ್ಮ ಸವಿಮತೋ,ನಿಮ್ಮ ಮಗುವಿನಂತ ಮನಸೋ??
ಸೆರೆಯಾಗಿ ಹೋದೆ ನಿಮ್ಮ ತೋಳ ತೆಕ್ಕೆಯಲಿ
ಮರೆಯಾಗಿದೆ ಜಗವೆಲ್ಲ ನಿಮಾದೊಂದೇ ಧ್ಯಾನದಲಿ...
ಇರುಳೆಲ್ಲ ಕಾಡುವ ಕನಸು ,
ನಿಮ್ಮನ್ನಗಲಿ ಬಾರದ ನನ್ನ ಮನಸು ...
ಹೃದಯದಲ್ಲೇ ಉಳಿಯುವ ಮಾತುಗಳು
ಒಂದೆರಡು ನಿಮಿಷವಾದರೂ ನಿನ್ನ ನೋಡ ಬಯಸುವ ನನ್ನ ಕಣ್ಣುಗಳು..
ಇನಿಯ ... ನನ್ನ ಜೇವದ ಗೆಳೆಯ
ನೀನೆ ನನ್ನ ಬಾಳ ಬಂಗಾರ
ನಿನ್ನ ನೆನೆಪೇ ನನಗಾಧಾರ...
Wednesday, January 6, 2016
ದೇಶ
ನಮ್ಮ
ತಾಯಿ ಎಂದು
ಹೊರಡುವ
ಯೋಧರೇ ..
ದೇಶಕಾಗಿ
ಪ್ರಾಣ ತೆತ್ತು
ನಮ್ಮ
ಕಾಯುವ ವೀರರೇ... ನಿಮಗಿದೋ ನಮ್ಮ
ನಮನ..
ಕರುಳ
ಕೊರೆವ ಚಳಿಯಲಿ,
ಮೈಯ ಸುಡುವ ಬಿಸಿಲಲಿ
ವೈರಿಗಳ
ನಾಶವೇ ಗುರಿಯೆಂಬ ಛಲದಲಿ
ಪ್ರಾಣವನ್ನು
ಮೀಸಲಿಟ್ಟು ತಾಯ್ನಾಡ ಮಡಿಲಲಿ
ನೊಂದು ಬೆಂದು ಕಾಯುವ
ವೀರ
ಯೋಧರೇ... ನಿಮಗಿದೋ ನಮ್ಮ ನಮನ...
ತಾಯಿ,
ಮನೆ, ಮಡದಿ, ಮಕ್ಕಳನ್ನು ತೊರೆದು,
ದೇಶವೇ
ಪ್ರಾಣವೆಂದು ಹಗಲು ಇರುಳು ದುಡಿದು..
ಶರ್ತೃಗಳ
ಅಟ್ಟಹಾಸವನ್ನು ಮೆಟ್ಟಿ ಮೆರಿದು..
ಕೆಚ್ಚದೆಯಲಿ
ನಮ್ಮ ಕಾಯುವ
ವೀರ
ಯೋಧರೇ... ನಿಮಗಿದೋ ನಮ್ಮ ನಮನ.

Wednesday, October 21, 2015
ಸಾವಿರಾರು ಜನರು ಸದಾ ಸುತ್ತ
ಸುತ್ತುವರಿದಿದ್ದರು,
ನಿನ್ನ ನೆನಪಾಗುತಿದ್ದೆ.. ಮತ್ತೆ ಮತ್ತೆ ನನ್ನ ಕಾಡುತಿದೆ..
ನಾವು ಅಲೆದಾಡಿದ ದಾರಿಗಳೆಷ್ಟೋ, ಮಾತನಾಡಿದ ಮಾತುಗಳೆಷ್ಟೋ...
ತಿರುಗಾಡಿದ ತಿರುವುಗಳೆಷ್ಟೋ, ಪ್ರೀತಿಸಿದ ಗಳಿಗೆಗಳೆಷ್ಟೋ..
ಹೋದ ಕಡೆಯಲೆಲ್ಲಾ ನಿನ್ನ ನೆನಪಾಗುತ್ತಿದೆ.
ಮಾತಿಲ್ಲದೆ ದನಿ ಕುಗ್ಗಿದೆ, ಪದಗಳು ಸತಿದ್ದೆ, ಮನ ಸೋತಿದೆ..
ಮತ್ತೆ ಮತ್ತೆ ನಿನ್ನ ನೆನಪಾಗುತ್ತಿದೆ..ನನ್ನ ಕಾಡುತಿದೆ..
ಮಧುರ ಎಂದು ಮುಗುಳ್ನನಗಲೇ??
ಕಣ್ಣಿನಿಂದ ಬೀಳುವ ಕಂಬನಿಯಣೆನಿಸಲೆ??
ಮನಸಿನಲ್ಲಾದ ಗಾಯ ಮೊದಲು..
ಅದರ ಮೇಲೆ ನಿನ್ನ ನೆನಪಿನ ನೋವಿನ ಬರೆಗಳು.
ರಾತ್ರಿಯ ನಿದ್ದೆಯಲಿ ಬಂದು ಬಡಿದೆಬ್ಬಿಸಿ ಹೋಗದಿರು...
ಮನದ ಮನೆಯನು ರಾಢಿ ಮಾಡದಿರು..
ಮತ್ತೆ ಬಾರದಿರು.. ಎಂದೂ
ನೆನಪಗದಿರು..
Subscribe to:
Posts (Atom)

