Monday, December 2, 2013

ನನ್ನ ಕವನ 

ಚಂಪೂ ಕಾವ್ಯ ವಲ್ಲ ... ಅಲಂಕಾರಗಳಿಲ್ಲ ..
ಭಾಮಿನಿ ವಾರ್ಧಕ ಷಟ್ಪದಿಗಳಿಲ್ಲ...
ಸರಳ ಭಾವಗಳ ಬರೆತಾ - ನನ್ನ ಕವನ 

ಹೃದಯದಾಳದ ಮಿಡಿತ, ಪದಗಳ ಕೊರೆತ, 
ಅಂತರಂಗದ ಮಾತು..
ಎದೆಯಾಳದ ತುಣುಕು- ನನ್ನ ಕವನ

ಕೋಗಿಲೆಯ ಕಂಟದಲಿ.. ಪುಟ್ಟ ಕಂದನ ಕೇಕೇಯಲಿ
ಅಮ್ಮನ ಅಕ್ಕರೆಯ ಮಾತಲ್ಲಿ,
ನಲಿದಾಡಲಿ - ನನ್ನ ಕವನ.

ಕಾಮನ ಬಿಲ್ಲಾಗಿ.. ಹಕ್ಕಿಯ ಹಾಡಾಗಿ..
ಗೆಜ್ಜೆಯ ದನಿಯಾಗಿ ,
ಹೂವಿನ ನಗುವಾಗಲಿ- ನನ್ನ ಕವನ 
ನಮ್ಮವರು

ಬೀದಿ ಬೀದಿ ತಿರುಗುವ ತಿರುಕ
ಮೊಂಡ ಕೈ ತೆತ್ತ ಭಿಕ್ಷುಕ
ಅಪ್ಪ ಅಮ್ಮನ ಕಾಣದ ಕಂದಮ್ಮಗಳು
ಇವರೆಲ್ಲರೂ ನಮ್ಮವರೇ ..
ನಮ್ಮೊಂದಿಗಿರುವವರೇ..

ಬಟ್ಟೆಯ ಕಾಣದ ಅರೆಬೆತ್ತಲೆ ಮೈಗಳು
ಹೊಟ್ಟೆಗಾಗಿ ಆಯುವ ಅಲೆಯುವ ಮಕ್ಕಳು
ನಾಳೆಯ ಕಾಣದವರೂ
ಇಂದಿನ ಬಾಳ್ವೆಗೆ ಹೊರಡುವವರು
ಇವರೂ ನಮ್ಮವರೇ.. ನಮ್ಮೊಂದಿಗಿರುವವರೇ..
ನಮ್ಮ ಪುಣ್ಯ ಭೂಮಿ ಭಾರತದವರೇ..