Wednesday, October 21, 2015

ಬೆಳೆ  ಇಲ್ಲ  -ರೈತರಿಗೆ  
ಬದುಕಲು  ನೆಲೆ  ಇಲ್ಲ  
ಹಗಲೆಲ್ಲ  ಇರುಳೆಲ್ಲ  ದುಡಿದರು  
ಅವರಿಗೇ ಕೂಳಿಲ್ಲ... 
ದಿನವೆಲ್ಲ ಬೆವರು  ಸುರಿದರು 
ಮುಖದಲ್ಲಿ  ಜೀವದ  ಕಳೆ ಇಲ್ಲ,
ಸಾಲದ  ಶೂಲವು  ಕೊರಳಿಗೆ  ಬಿದ್ದರು  
ಮೃತ್ಯು  ದೇವತೆಗೆ  ಕರುಣೆ ಇಲ್ಲ. 
ಹೊರಳುತ್ತ, ನರಳುತ್ತ, ತಳಮಳಿಸುತ್ತ  
ಜೀವವು ಬೆಂದರು,
ಮರಣದ  ಬೆಳಕು ಕಾಣಲಿಲ್ಲ, 
ಬದುಕಲು ಆಸೆಯಿಲ್ಲ -- ವಿಧು 

ಅನ್ನದಾತರು  ಸಾಯುತಿದ್ದರೆ .. ಮoದೋoಮ್ಮೆ  ಕುಡಿಯುವ  ನೀರು  ಕಲುಷಿತ , ಉಸಿರಾಡುವ  ಗಾಳಿ  ಕಲುಷಿತ,ದುಡಿಯಲು  ರೈತನಿರುವುದಿಲ್ಲ  ಆಗ ಕೂತು ನಮ್ಮ  ಬೆಳ್ಳಿ -ಬಂಗಾರ , ದುಡನ್ನು ತಿನ್ನಲಾದಿತೆ? ಏಚೆತ್ತುಕೊಳ್ಳಿ . 
ತoಪದವೋ ಎಲ್ಲಾ ತoಪದವೋ.... 
ಧಗೆಯಿಂದ ಸುಡುತ್ತಿದ  ಧರೆಯೆಲ್ಲ , 
ಒಣಗಿದ್ದ  ಗಿಡ ಮರ, ಹೋಬಳ್ಲಿಗಳೆಲ್ಲ .... ಹಸಿರದವೋ ! 
ಹಸಿರ  ಹಾಸಿಗೆಯಂತೆ  ಭುವಿಯೆಲ್ಲ  ನಗುತವೆ , 
ನದಿಗಳು ಝುರಿಗಳು ಕುಣಿಯುತ್ತ  ಹರಿದಾವೆ..
ಮಳೆರಾಯ ನೀ ಬಂದು ಇಳೆಯೆಲ್ಲ ಮುದ್ದಿಸಿ ಲಾಲಿಸಿ ಹೋದಾಗ ,
ಹಸಿರದವೋ  ಎಲ್ಲಾ ಹಸಿರದವೋ.... 
ತoಪದವೋ ಎಲ್ಲಾ ತoಪದವೋ... 

ಸಾವಿರಾರು ಜನರು ಸದಾ ಸುತ್ತ ಸುತ್ತುವರಿದಿದ್ದರು,
ನಿನ್ನ ನೆನಪಾಗುತಿದ್ದೆ.. ಮತ್ತೆ ಮತ್ತೆ ನನ್ನ ಕಾಡುತಿದೆ..
ನಾವು ಅಲೆದಾಡಿದ ದಾರಿಗಳೆಷ್ಟೋ, ಮಾತನಾಡಿದ ಮಾತುಗಳೆಷ್ಟೋ...
ತಿರುಗಾಡಿದ ತಿರುವುಗಳೆಷ್ಟೋ, ಪ್ರೀತಿಸಿದ ಗಳಿಗೆಗಳೆಷ್ಟೋ..

ಹೋದ ಕಡೆಯಲೆಲ್ಲಾ ನಿನ್ನ ನೆನಪಾಗುತ್ತಿದೆ.
ಮಾತಿಲ್ಲದೆ ದನಿ ಕುಗ್ಗಿದೆ, ಪದಗಳು ಸತಿದ್ದೆ, ಮನ ಸೋತಿದೆ..
ಮತ್ತೆ ಮತ್ತೆ ನಿನ್ನ ನೆನಪಾಗುತ್ತಿದೆ..ನನ್ನ ಕಾಡುತಿದೆ..

ಮಧುರ ಎಂದು ಮುಗುಳ್ನನಗಲೇ??
ಕಣ್ಣಿನಿಂದ ಬೀಳುವ ಕಂಬನಿಯಣೆನಿಸಲೆ??
ಮನಸಿನಲ್ಲಾದ ಗಾಯ ಮೊದಲು..
ಅದರ ಮೇಲೆ ನಿನ್ನ ನೆನಪಿನ ನೋವಿನ ಬರೆಗಳು.
ರಾತ್ರಿಯ ನಿದ್ದೆಯಲಿ ಬಂದು ಬಡಿದೆಬ್ಬಿಸಿ ಹೋಗದಿರು...
ಮನದ ಮನೆಯನು ರಾಢಿ ಮಾಡದಿರು..
ಮತ್ತೆ ಬಾರದಿರು.. ಎಂದೂ ನೆನಪಗದಿರು..

Thursday, October 15, 2015

ನನ್ನದೆಲ್ಲವ ನಿನಗೆ ಕೊಟ್ಟು
ಇದ್ದರೂ ಇರದಂತೆ
ಇದ್ದು ಬಿಡುವ ಆಸೆ...
ನಿನ್ನಲೇ ಮುಳುಗಿ ಬಿಡುವ ಆಸೆ...