Monday, December 2, 2013

ನನ್ನ ಕವನ 

ಚಂಪೂ ಕಾವ್ಯ ವಲ್ಲ ... ಅಲಂಕಾರಗಳಿಲ್ಲ ..
ಭಾಮಿನಿ ವಾರ್ಧಕ ಷಟ್ಪದಿಗಳಿಲ್ಲ...
ಸರಳ ಭಾವಗಳ ಬರೆತಾ - ನನ್ನ ಕವನ 

ಹೃದಯದಾಳದ ಮಿಡಿತ, ಪದಗಳ ಕೊರೆತ, 
ಅಂತರಂಗದ ಮಾತು..
ಎದೆಯಾಳದ ತುಣುಕು- ನನ್ನ ಕವನ

ಕೋಗಿಲೆಯ ಕಂಟದಲಿ.. ಪುಟ್ಟ ಕಂದನ ಕೇಕೇಯಲಿ
ಅಮ್ಮನ ಅಕ್ಕರೆಯ ಮಾತಲ್ಲಿ,
ನಲಿದಾಡಲಿ - ನನ್ನ ಕವನ.

ಕಾಮನ ಬಿಲ್ಲಾಗಿ.. ಹಕ್ಕಿಯ ಹಾಡಾಗಿ..
ಗೆಜ್ಜೆಯ ದನಿಯಾಗಿ ,
ಹೂವಿನ ನಗುವಾಗಲಿ- ನನ್ನ ಕವನ 
ನಮ್ಮವರು

ಬೀದಿ ಬೀದಿ ತಿರುಗುವ ತಿರುಕ
ಮೊಂಡ ಕೈ ತೆತ್ತ ಭಿಕ್ಷುಕ
ಅಪ್ಪ ಅಮ್ಮನ ಕಾಣದ ಕಂದಮ್ಮಗಳು
ಇವರೆಲ್ಲರೂ ನಮ್ಮವರೇ ..
ನಮ್ಮೊಂದಿಗಿರುವವರೇ..

ಬಟ್ಟೆಯ ಕಾಣದ ಅರೆಬೆತ್ತಲೆ ಮೈಗಳು
ಹೊಟ್ಟೆಗಾಗಿ ಆಯುವ ಅಲೆಯುವ ಮಕ್ಕಳು
ನಾಳೆಯ ಕಾಣದವರೂ
ಇಂದಿನ ಬಾಳ್ವೆಗೆ ಹೊರಡುವವರು
ಇವರೂ ನಮ್ಮವರೇ.. ನಮ್ಮೊಂದಿಗಿರುವವರೇ..
ನಮ್ಮ ಪುಣ್ಯ ಭೂಮಿ ಭಾರತದವರೇ.. 

Friday, November 22, 2013

ನಿಸರ್ಗ  


ಮನುಜನಿಗಿದು ನೀ ಕೊಟ್ಟ ವರ
ಭೂಮಿಗೊಲಿದ ಮಧುರ ಸ್ವರ 
ನಮಗಿರೊವುದೊಂದೇ ಕಣಜ 
ಅದನಾರಿಯಬೇಕು ನೀ ಮನುಜ. 

ಕೊನೆಗಾಣಿಸಿ ಅವನು ವನ ಐಸಿರಿ
ಕಟ್ಟಿಕೊಂಡಿಹನು ತನೆಗೆ ತಾನೇ ಗೋರಿ
ಮಾಡಿ ಜೀವ ಜಂತು ಗಳ ಕೊಲೆ
ತಿಳಿದವಗೆ ಇದರ ಬೆಲೆ.

ಅಳಿಸದಿರು ನಿಸರ್ಗದ ಮಂದಹಾಸ
ತೋರದಿರು ಅದರ ಮೇಲೆ ನಿನ್ನ ಅಟ್ಟಹಾಸ
ಕೊನೆಗಾಣಿಸದಿರು ಅವಳ ಸುಂದರ ಛಾಯೆ 
ತೊಲಗಿಸು ತಾಯೆ ಅವನಿಂದ ಈ ಮಾಯೆ.

ಬೆಳೆಸೋಣ ಬನ್ನಿ ನಾವೆಲ್ಲರೂ ಸೀರಿ
ವನವೇ ಸಂಪ್ತಾತು ಆದ ನೀ ಆರಿ
ಸುತ್ತಲೂ ಆವರಿಸಿದರೆ ನಿಸರ್ಗ
ನೀ ಕಂಡು ಸವಿದರೆ ಅದೇ ಸ್ವರ್ಗ..

ಮರಗಳ ಬೆಳೆಸಿ .. ನಮ್ಮ ಪೀಳೀಗೇಯ ಉಳಿಸಿ...

Monday, November 18, 2013

ಬಾಯಾರೇಕೆ ನೀಗುವ ಮುನ್ನವೇ ಮಳೆ ನಿಂತು ಹೂಗಿತ್ಹು...
ನಿನ್ನ ನೆನಪನ್ನು ಮೆಲುಕು ಹಾಕುತಿದ್ದೆ....
ನಿದ್ದೆ ಬರುವ ಮುನ್ನವೇ ರಾತ್ರಿ ಕಳೆದು ಹೋಗಿತು..
ಸಂಜೆಯ ತಂಗಾಳಿ, ತೇಲಿ ಬಂದ ಪರಿಮಳ, 
ಮುಂಗುರುಳ ನರ್ತನ, ಕೈ ಹಿಡಿದು ನೆಡೆಸುವಂತೆ...., 
ಇನಿಯಾನೊಬ್ಬನಿದ್ದಾನೆ!!

ಒಬ್ಬಳೇ ಕೂತಾಗ ಮನ ಸೋತಾಗ, 
ನೊಂದು ಕಂಬನಿ ಹರಿಸಿದಾಗ, ಬಂದು ಕಣ್ಣೊರಸಿ ನಗಿಸುವಂತೆ..,
ಗೆಳೆಯನೊಬ್ಬನಿದ್ದಾನೆ!!

ನನ್ನ ನಿದ್ದೆಯಲಿ ಬಣ್ಣ ಬಣ್ಣದ ಕನಸು ಚೆಲ್ಲಿ,
ಅವನ ತೋಳ ಚಾಚಿ, ಲಾಲಿ ಹಾಡಿ, ಮಲಗಿಸುವಂತೆ..,
ನಲ್ಲನೊಬ್ಬನಿದ್ದಾನೆ!!

ಸುಮ್ಮನೆ ಕೂತಾಗ ಮಾತನಾಡಿಸಿ, ಹೋದಲೆಲ್ಲಾ ಹಿಂಬಾಲಿಸುತ್ತಾ.
ಕೋಪ ಬಂದಾಗ ಸಂತ್ವನಿಸುತ್ತಾ, ಗೆಳೆಯನೊಬ್ಬನಿದ್ದಾನೆ,
ನನ್ನೋಡನೆಯೆ...ನನ್ನೊಳಗೆಯೇ ಅವಿತ ಒಡೆಯನೊಬ್ಬನಿದ್ದಾನೆ!!!