Thursday, 6 October 2011

BAALYA

ತಿರುಗಿ ನೋಡ ಬಯಸಿದೆ ಮನಸು,
ನಾ ಬಂದ ದಾರಿಯ-ನನಗರಿಯದಂತೆ,
ತಿರುಗಿ ನೋಡ ಬಯಸಿದೆ ಮನಸ್ಸು..

ಅಂಗಳದ ರಂಗವಲ್ಲಿ, ಹಾರುತಿಹ ಗಾಳಿಪಟ,
ಪುಟ್ಟದಾದ ಲಂಗ ಕುಪ್ಪಸ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ತುತ್ತಿಡುವ ಅಮ್ಮ, ಆಡಿಸುವ ಅಪ್ಪ, 
ಬೆತ್ತ ಹಿಡಿದ ಮೇಸ್ಟ್ರ, ಕಥೆ ಹೇಳುವ ಅಜ್ಜಿ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ಬರಿಯ ಹೋರಾಟದ ಬದುಕು - ಸಾಕೆನಿಸಿ
ಬಯಸಿದೆ ಮನವು ನೆಮ್ಮದಿಯ,
ಮಲಿನವಾದ ಜೀವನವು- ಸಾಕೆನಿಸಿ
ಹುಡುಕ ಹೊರಟಿದೆ ಮನವು- ಹೊಸತನವ..

ARPANAE: NANNA KANNADA NADIGE

ಜಯ ಜಯ ಈ ನಾಡಿಗೆ
ಕರುನಾಡ ತಾಯಿ ಭುವನೇಶ್ವರಿಗೆ..


ಕನ್ನಡ ನಾಡಿದು ಧಾನ್ಯದ ನೆಲ,
ಇಲ್ಲಿ ಜನಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ,
ಕನ್ನಡಾಂಬೆಯ ಮಾಡಿಲ್ಲಲ್ಲಿರುವ ಈ ಬಾಲ,
ಸಿಗಲಾರದು ಬೇರೆಲ್ಲೂ ಈ ಛಲ..


ಸತ್ಯ ಅಹಿಂಸದಿಂದ ಮೆರೆದ ನಾಡಿದು,
ಸಂಯಮ ಶೀಲರ ಪುಣ್ಯದ ಬೀಡಿದು.
ಗಂಧದ ಗುಡಿದು, ನಮ್ಮ ತವರೂರಿದು,
ಹಾಲ್ಜ್ಜೆನು ಹರಿಯುವ ನಾಡಿದು ನಮ್ಮದು..


ಕನ್ನಡದ ಕೀರ್ತಿಯನ್ನು ಎಲ್ಲೆಡೆಗೆ ಸಾರಿರಿ..
ಕನ್ನಡದ ಕಂಪನ್ನು ಎಲ್ಲೆಡೆಗೆ ಬೀರೀರಿ,
ನಮ್ಮ ತಾಯ್ನಾಡಿಗೆ ಶುಭ ಗೀತೆಯ ಹಾಡಿರಿ..
ಕನ್ನಡಾಂಬೆಗೆ ಐಕ್ಯ-ದಾರತಿಯ ಬೆಳಗಿರಿ..


ಈ ನಾಡ ಮಣ್ಣಲ್ಲಿ ಬೆಳೆದ ವೀರ ಮಕ್ಕಳೇ ಎಳೀರೀ
ನಮ್ಮ ತಾಯ ಸೇವೆಯ ಗೈಯುವ ಬನ್ನಿರಿ..
ಕನ್ನಡವ ಉಳಿಸಿರಿ, ಕನ್ನಡವ ಬೆಳೆಸಿರಿ, ಕನ್ನಡಾಂಬೆಯ ಗೆಲಿಸಿರಿ...

NEE NANNAVANALLA

ತಿಳಿದಿಹೆನು ನಾನು...
ನೀ ನನ್ನವನಲ್ಲಾ..
ನನಗೇನು ಅಲ್ಲ..
ಆದರೆ ಸ್ನೇಹವೆಂಬ ಸುಧೆ,
ಕರೆಸಿತು ಹತ್ತಿರ,
ಬೆಳೆಸಿತು ಹೃದಯದಲಿ,
ಪ್ರೀತಿಯೆಂಬ ಅಂಕುರ....
ಬಲ್ಲೆಯಾದರೆ ನಾನು-
ಇದು ಮಾತ್ರ ಅಮರ....

TAJMAHAL

ನಿನ್ನ ಮನದಂಗಳದಿ,
ನನ್ನ ಪ್ರೀತಿಯ ತಳದಿ,
ಕಟ್ಟಿಹೇನು ಹೊಸದಾಗಿ ಹಳೆಯ ನೆನೆಪಿನ ಮಹಲ್ಲೂ..
ನಮ್ಮ ಪ್ರೀತಿಯ ಹೊಸದೊಂದು ತಾಜುಮಹಲ್ಲೂ..


ಈ ಮಹಲಿನ ಪ್ರೇಮ ರಾಜ್ಯದ ರಾಜ ನೀನು..
ನಿನ್ನ  ಅನುರಾಗಕೆ, ಪ್ರೀತಿಗೆ, ಸೋತಿರುವ ದಾಸಿ ನಾನು..


ಕಾಣದೆ ನಿನಗೀ ಮಹಲ್ಲೂ..
ಅಂತರಂಗದ ಕಣಗಳ ತೆರೆದು..
ಪ್ರೇಮ ದೀವಿಗೆಯ ಹಿಡಿದು..
ಹೃದಯದಾಳಕೆ  ಇಳಿದು-
ನೋಡು ಕಾಣುವುದು...
ಹಳೆಯ ನೆನಪಿನ ಹೊಸದಾಗಿ ಕಟ್ಟಿದ ತಾಜ್‌ಮಹಲ್ಲೂ

ಅಮರವಾದ ನಮ್ಮ ಪ್ರೀತಿಯ ಮಹಲ್ಲೂ..

NANNA MANA

ಮನವು ಹಾರಿದೆ- ಗಾಳಿ ಪಟದಂತೆ
ಬಾನಿನಲ್ಲಿ ಸೂತ್ರವಿಲ್ಲದೆ- ನನಗರಿಯದಂತೆ..
ಚಿಟ್ಟೆಯಂತೆ. ಚೆಂಡಂತೆ...
ಇಲ್ಲದೆ ನಾಳೆಯ ಚಿಂತೆ..
ಆಸೆ ಗಳು ಮಿಣಿಗುತಿವೆ..
ತಾರೆಗಳು ಹೊಳೆವಂತೆ..

MANA

ಮಿಡಿಯುತಿದೆ ಭಾವನೆಗಳ
ನೂರು ವೀಣಾ- ಮನದೊಳಗೆ
ಹುಚೆದ್ದು ಕುಣಿಯುತಿದೆ
ಭಾವ ತರಂಗದಲ್ಲಿ......
ನಿನ್ನ ನೆನಪಿನ ಕಲ್ಪನೆಗಳಲ್ಲಿ
ತೇಲಿ ಹೋಗುವ ಮನವಿದು, 
ಬಾರೆಯಾ?? ಹಿಡಿದು ನಿಲ್ಲಿಸೆಯಾ?
ಬೆಚ್ಚಿ ಕೊರಗುತಿಹೆ ತಬ್ಬಲಾರೆಯ...

KATTHALA KANASU

ಚುಕ್ಕಿ ಎನಿಸುವ ಬಾರ...
ಈ ಸುಂದರ ರಾತ್ರಿಯಲ್ಲಿ
ಮುತ್ತ ಹುಡುಕುವ ಬಾರ..
ರಾತ್ರಿಯ ಈ ಕಪ್ಪು ಕುರುಳಲಿ

ಶೀತಾಲನ ಸೌಂದರ್ಯವ
ಸವಿಯುವ ಬಾರ..
ಹಳೆಯ ದುಖವನು ತೊರೆಯುತ
ಮನದ ಅಗಲುವಿಕೆಯ ದೂಡುತಾ,
ಜಗವ ಮರೆಯುತ..

ಚುಕ್ಕಿ ಎನಿಸುವ ಬಾರ...
ಈ ಸುಂದರ ರಾತ್ರಿಯಲ್ಲಿ
ಒಟ್ಟಿಗೆ ಸೇರೋಣ ಬಾರ
ರಾತ್ರಿಯ ಈ ಕಪ್ಪು  ಕುರುಳಲಿ..

Chumbana

ಚುಂಬನ....
          ಬಾರಿ ಚುಂಬನವಲ್ಲ,.,
ಅದು ಪ್ರೀತಿಯ
          ಪ್ರತಿ ಸ್ಪಂದನ..
ಪ್ರೇಮಿಗಳು ವಿಹರಿಸೋ
          ಅನುರಾಗ ನಂದನ,
ಎರಡು ಹೃದಯಗಳ
          ಪ್ರೇಮದ ಮಿಲನ...

Nannaase

ನೀ ನೆಡವ ಹಾದಿಯಲಿ , ಹೂವಾಗಿ ಕಾಲಿನಡಿ
ಹಿತ ತರುವ ಆಸೆ
ನಿನ್ನ ನಿದ್ದೆಯಲಿ, ಮೆತ್ತನೆಯ  ದಿಂಬಾಗಿ,
ತೋಳ ಚಾಚುವಾಸೆ...
ನಿನ್ನ ಬಣ್ಣದ ಕನಸುಗಳ್ಲಲ್ಲಿ,
ರಾಣಿ ನಾನಾಗುವ  ಆಸೆ..
ನೀ ನಾಡುವ ಹಾಡಿಗೆ,
ರಾಗ ನಾನಾಗುವಾಸೆ..
ಆವೇಶ ಕೋಪವೀರೆ, ಶೀತಲ ಹಿಮವಾಗಿ,
ನಿನ್ನ ಸಂತೈಪ ಅಭಿಲಾಷೆ..
ನಿನ್ನ ನಗುಮೊಗದ ಅರಳಿಕೆಗೆ, ಚುಂಬಿಸುವ,
ಮುದ್ದಿಸುವ ಕೊನೆಯಾಸೆ...